ಕಾವ್ಯುತ್ಯೋಗಂ - ಕುಲುಮೆಯಲಿ ಹದಗೊಳುವ ರ‍್ಪೊನ್ನು


Author: ಬಸವರಾಜ ಕೋಡಗುಂಟಿ

Category: ವಿಮರ್ಶೆ

Publisher: ಬಂಡಾರ ಪ್ರಕಾಶನ

Year of Publication: 2023


Price: ₹120 ₹96

Qty:

Description

ಬಸವರಾಜ ಕೋಡಗುಂಟಿ ಅವರು ಬೇಂದ್ರೆಯವರ ಆಯ್ದ ನಾಲ್ಕು ಕವನಗಳ ಬಾಶಿಕ ಓದನ್ನು ಈ ಪುಸ್ತಕದಲ್ಲಿ ಮಾಡಿದ್ದಾರೆ. ಕವನದ ಬಾಶಿಕ ರಚನೆಯನ್ನು ತೋರಿಸುವ ಮತ್ತು ಈ ರಚನೆ ಹೇಗೆ ಕವನದ ತಾತ್ವಿಕತೆಯನ್ನು ಕಟ್ಟಿಕೊಡುತ್ತದೆ ಇಲ್ಲವೆ ಪೋಶಿಸುತ್ತದೆ ಎಂಬುದನ್ನು ಇಲ್ಲಿ ತೋರಿಸಿದ್ದಾರೆ. ತುಂಬಿ ಬಂದಿತ್ತಾ, ಹಕ್ಕಿ ಹಾರುತಿದೆ ನೋಡಿದಿರಾ, ಬಾರೋ ಸಾದನೆಕೇರಿಗೆ ಮತ್ತು ಗುರುದೇವ ಈ ನಾಲ್ಕು ಕವನಗಳನ್ನು ಆನ್ವಯಿಕ ಓದಿಗೆ ಒಳಪಡಿಸಿದ್ದಾರೆ. ಕನ್ನಡದಲ್ಲಿ ಇದು ವಿಮರ‍್ಶೆಯ ವಿನೂತನ ಪ್ರಯೋಗವಾಗಿದೆ. ಈಗಿನ ಬರವಣಿಗೆ ಕವನದ ಆಶಯವನ್ನು ಕೇಂದ್ರವಾಗಿ ಅವಲಂಬಿಸದೆ ಓದುಗರಿಗೆ ಆಶಯವನ್ನು ಮುಕ್ತವಾಗಿಡುತ್ತದೆ. ಈ ಪುಸ್ತಕ ಬೇಂದ್ರೆಯ ಕವನವನ್ನು, ಕವನದ ಬಾಶೆಯನ್ನು, ತಾತ್ವಿಕತೆಯನ್ನು ಆ ಮೂಲಕ ಕನ್ನಡ ಕವನ, ಕವನದ ಬಾಶೆಯನ್ನು ಮತ್ತು ಕಾವ್ಯವನ್ನು ಇನ್ನೊಂದು ನೆಲೆಯಲ್ಲಿ ಬಾಶೆಯನ್ನು ಅರಿತುಕೊಳ್ಳುವುದಕ್ಕೆ ಸಹಾಯಕ.