ಅರಿಷ್ಟನೇಮಿ ಎಂಬ ರೂಪಕ


Author: ಬಾಲಕೃಷ್ಣ ಹೊಸಂಗಡಿ

Category: ಸಂಶೋಧನೆ

Publisher: ಬಂಡಾರ ಪ್ರಕಾಶನ

Year of Publication: 2020


Price: ₹60 ₹54

Qty:

Description

ಜಗತ್ತಿನ ಶ್ರೇಷ್ಟ ರಚನೆಗಳು ಉಳಿದ ಹಾಗೆ ಅದರ ರಚನೆಯ ಹಿಂದಿನ ಹೆಸರುಗಳು ಉಳಿಯುವುದಿಲ್ಲ. ಕಲೆಯನ್ನು ಆರಾದಿಸುವ ಈ ಜಗತ್ತಿಗೆ ಕಲಾವಿದರನ್ನು ಮುಚ್ಚಿಡುವ ಅವಶ್ಯಕತೆ ಯಾಕೆ ಬರುತ್ತದೆಯೊ ತಿಳಿಯದು. ಆದರೆ, ಪಂಡಿತ ವರ್ಗ ಮುಚ್ಚಿಡುವ ಈ ಅಂಶವನ್ನು ಸಮಾಜ ದಂತಕತೆಯಾಗಿ ಉಳಿಸಿಕೊಂಡು ಬರುವುದನ್ನು ಕಾಣಬಹುದು. ಇಂತದೊಂದು ಅರಿಷ್ಟನೇಮಿ ಎಂಬ ರೂಪಕ. ಬಾಲಕೃಷ್ಣ ಹೊಸಂಗಡಿ ಅವರು ಶ್ರವಣಬೆಳುಗೊಳದ ವಿಶ್ವದ ಬೆರಗಿನ ಕಲಾಕೃತಿಯಾದ ಗೊಮ್ಮಟನನ್ನು ಕೆತ್ತಿದ ಕಲಾವಿದನ ಕತೆಯನ್ನು ಜನಪದ, ಪರಂಪರೆ, ನಂಬಿಕೆ, ಆಚರಣೆ, ಇವುಗಳಿಂದ ಹೆಕ್ಕಿಕೊಂಡ ಆಕರಗಳನ್ನು ಹೆಣೆದು ಅರಿಷ್ಟನೇಮಿ ಎಂಬ ರೂಪಕವನ್ನು ಕಟ್ಟಿಕೊಡುತ್ತಾರೆ. ಇದರ ಹಿಂದೆ ಸಂಶೋಧಕರ ಶ್ರಮ, ಪ್ರತಿಭೆ ಎದ್ದಕಾಣುತ್ತದೆ.