ಕನ್ನಡ ಆರಯ್ಪು ಸರಣಿ - 2024


ಬಂಡಾರ ಪ್ರಕಾಶನ, ಮಸ್ಕಿ ಯುವ ಸಂಶೋದಕರನ್ನು ಗುರುತಿಸುವ ಮತ್ತು ಕನ್ನಡ-ಕರ‍್ನಾಟಕಗಳಿಗೆ ಸಂಬಂದಿಸಿದ ಗುಣಾತ್ಮಕ ಸಂಶೋದನೆಯನ್ನು ಪ್ರೋತ್ಸಾಹಿಸುವ ಆಶಯದಿಂದ ಮಹತ್ವದ 'ಕನ್ನಡ ಆರಯ್ಪು' ಪುಸ್ತಕ ಸರಣಿಯನ್ನು ತರುತ್ತಿದೆ.

ಕನ್ನಡ- ಕರ‍್ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ
ಪ್ರತಿವರುಶ ಕನ್ನಡ-ಕರ‍್ನಾಟಕಗಳಿಗೆ ಸಂಬಂದಿಸಿದ ಯಾವುದೆ ವಿಶಯದ, ಕನ್ನಡದಲ್ಲಿ ಇರುವ ಪಿಎಚ್ಡಿ ಪದವಿಯನ್ನು ಪಡೆದ ಸಂಶೋದನಾ ಪ್ರಬಂದಗಳನ್ನು ಆಯ್ಕೆ ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತದೆ. ಪ್ರತಿ ಕ್ಯಾಲೆಂಡರಿನ ವರುಶದಲ್ಲಿ ಪಿಎಚ್ಡಿ ಪದವಿಯನ್ನು ಪಡೆದ ಸಂಶೋದನಾ ಪ್ರಬಂದವನ್ನು ಇಲ್ಲಿ ಪ್ರಕಟಣೆಗೆ ಪರಿಗಣಿಸಲು ಸಲ್ಲಿಸಬಹುದು. ಪ್ರತಿವರುಶ ಪ್ರಬಂದಗಳನ್ನು ಸಲ್ಲಿಸಲು ಮುಂದಿನ ವರುಶದ ಜನವರಿ 31 ಕೊನೆಯ ದಿನವಾಗಿರುತ್ತದೆ. ಇವುಗಳನ್ನು ಸಲ್ಲಿಸಿ,

ಮಾನದಂಡ
1. ವಿಷಯದ ಪ್ರಾಮುಖ್ಯತೆ, ಪ್ರಸ್ತುತತೆ - 10
2. ಇದುವರೆಗಿನ ಅದ್ಯಯನ ಸಮೀಕ್ಷೆ - 10
3. ಆಯ್ದುಕೊಂಡ ವಿಧಾನ ಮತ್ತು ಸಿದ್ದಾಂತ ಸೂಕ್ತತೆ - 10
4. ವಿಧಾನ ಮತ್ತು ಸಿದ್ದಾಂತದ ಅನ್ವಯ ಸೂಕ್ತತೆ - 10
5. ಮಾಹಿತಿ ಸಂಗ್ರಹಣೆ ವಿಧಾನ - 10
6. ಮಾಹಿತಿ ವಿಶ್ಲೇಷಣೆ ವಿಧಾನ - 10
7. ಪ್ರಬಂಧದ ರಚನೆ - 10
8. ಪ್ರಬಂಧದ ಬಾಶೆ - 10
9. ಪ್ರಬಂಧ ಸಂಬಂಧಿಸಿದ ವಿಷಯಕ್ಕೆ ಕೊಟ್ಟ ಕೊಡುಗೆ (ವಿಷಯದ ಮುನ್ನಡೆಗೆ ಕೊಡುಗೆ) - 10
10. ಪ್ರಬಂಧ ಸಮಾಜಕ್ಕೆ ಕೊಟ್ಟ ಕೊಡುಗೆ - 10

ಆಯ್ಕೆ
ಒಟ್ಟು ನೂರು ಅಂಕಗಳಲ್ಲಿ 75ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದವುಗಳನ್ನು ‘ಕನ್ನಡ ಆರಯ್ಪು’ ಸರಣಿಯಲ್ಲಿ ಪ್ರಕಟಿಸಲು ಪರಿಗಣಿಸಲಾಗುವುದು 65-74 ಅಂಕಗಳನ್ನು ಪಡೆದುಕೊಂಡ ಪ್ರಬಂಧಗಳನ್ನು ಪ್ರಕಾಶನದಿಂದ ಪುಸ್ತಕ ರೂಪದಲ್ಲಿ ಪ್ರಕಟಿಸಲು ಪರಿಗಣಿಸಲಾಗುತ್ತದೆ.

ಗೌರವಧನ
ಕನ್ನಡ ಆರಯ್ಪು ಸರಣಿಯಲ್ಲಿ ಪ್ರಕಟಣೆಗೆ ಆಯ್ಕೆಯಾದ ಸಂಶೋಧನಾ ಪ್ರಬಂಧವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು, ಹತ್ತು ಗೌರವ ಪ್ರತಿಗಳನ್ನು ಕೊಡಲಾಗುವುದು ಮತ್ತು ಅಯ್ದು ಸಾವಿರ ರೂಪಾಯಿ ಗೌರವಧನ ನೀಡಲಾಗುವುದು, ಲೇಖಕರಿಗೆ ೪೦% (ನೂರಕ್ಕೂ ಹೆಚ್ಚು ಪ್ರತಿ ತೆಗೆದುಕೊಂಡರೆ ೫೦%) ರಿಯಾಯಿತಿ ಕೊಡಲಾಗುವುದು.

1) ಪದವಿ ಪ್ರಮಾಣಪತ್ರದ ಪ್ರತಿ
2) ಸಂಶೋದನೆಯ ವಿಶಯ, ಉದ್ದೇಶ, ವಿದಾನ, ಮಹತ್ವ, ಪರಿವಿಡಿ ಮತ್ತು ಪಲಿತ ಇವುಗಳನ್ನು ಒಳಗೊಂಡ ೫೦೦ ಪದಮಿತಿಯ ಸಾರಾಲೇಕ
3) ಪೂರ‍್ಣ ಮಹಾಪ್ರಬಂದ

ಏನಾದರೂ ಕೆಳಬೇಕಿತ್ತೆ? ಬರೆಯಿರಿ: kannadaaraypu@bandaraprakashana.com* Required Fields

** Upload PDF files only