Author: ರೇಣುಕಾ ಕೋಡಗುಂಟಿ
Category: ಕವನ ಸಂಕಲನ
Publisher: ಬಂಡಾರ ಪ್ರಕಾಶನ
Year of Publication: 2011
Price: ₹80 ₹64
ಕವಿ, ಕತೆಗಾರರಾಗಿ ಹೆಸರು ಮಾಡಿರುವ ರೇಣುಕಾ ಕೊಡಗುಂಟಿ ಅವರ ಮೊದಲ ಕವನ ಸಂಕಲನ ಬಳಪದ ಚೂರು. ಇದರಲ್ಲಿ ಮನುಷ್ಯ ಸಂಬಂಧಗಳು, ಮಾನವೀಯತೆ, ಸಮಾಜ, ಸಂಸ್ಕ್ರುತಿ ಮೊದಲಾದವುಗಳ ಸೂಕ್ಷ್ಮ ಪದರುಗಳನ್ನು ನಿರುಮ್ಮಳವಾಗಿ, ಆವೇಗವಿಲ್ಲದೆ ಪರಿಚಯಿಸುವ, ಅಲ್ಲಲ್ಲಿ ಸಮಾಜವನ್ನು ವಿಮರ್ಶಿಸುವ, ಕಟಕುವ, ತಿಳಿಯಾದ ಹಾಸದಲ್ಲಿ ಮಾತನಾಡುವ ಕವನಗಳು ಸಾಮಾಜಿಕ ಕಾಳಜಿಯನ್ನೂ ಎಚ್ಚರವನ್ನೂ ಒಟ್ಟೊಟ್ಟಿಗೆ ಕಟ್ಟಿಕೊಡುತ್ತವೆ. ಸರಳವಾದ ಭಾಷೆ, ರಚನೆಯಿಂದ ಹಗುರವಾಗಿ ಓದಿಸಿಕೊಂಡು ಹೋಗುವ ಕವನಗಳು ಇಲ್ಲಿವೆ.