ಬುದ್ದ ಮತ್ತು ಆತನ ದಮ್ಮ


Author: ಬಿ. ಆರ್. ಅಂಬೇಡ್ಕರ್

Category: ದಾರ್ಮಿಕ

Publisher: ಪಾಲಿ ಇನ್ಸ್ ಟಿಟ್ಯೂಟ್

Year of Publication: 2022


Price: ₹400 ₹360

Out of Stock

Description

ಪಾಲಿ ಇನ್ಸ್ಟಿಟ್ಯೂಟ್ ಕಲಬುರಗಿ ಸಂಸ್ಥೆಯು ಉನ್ನತ ಶಿಕ್ಷಣದ ಅಡಿಯಲ್ಲಿ ರಚಿತವಾಗಿರುವ ಸ್ವಾಯತ್ತ ಸಂಸ್ಥೆ.ಇದರಿಂದ ಹೊರಬಂದ ಈ ಅದ್ಬತ ಪುಸ್ತಕವು ಅಂಬೇಡ್ಕರ್ ಅವರ ಕೊನೆಯ ಕೃತಿ ,ಬಾರತದ ಇತಿಹಾಸದುದ್ದಕ್ಕೂ ನಾವೆಲ್ಲಾ ಈವರೆಗೆ ಬುದ್ದನ ಕುರಿತಾಗಿ ಅಶ್ವಘೋಷನ 'ಬುದ್ದ ಚರಿತೆ' ಎಂಬ ಕೃತಿಯನ್ನು ಆಧರಿಸಿದ ಪಠ್ಯವನ್ನು ಓದಿಕೊಂಡು ಬಂದಿದ್ದೆವೆ.ಹಾಗಾಗಿ ಬುದ್ದನ ಇತಿಹಾಸ, ಆತನ ಬದುಕು,ನಿಲುವುಗಳು ಅಥವಾ ಅವನ ಧಮ್ಮ ಕುರಿತಾಗಿ ಹಲವು  ಗೊಂದಲಗಳು ಮತ್ತು ಸಂಶಯಗಳು ನಿರಂತರವಾಗಿ ಬೌದ್ದ ಧರ್ಮೇತರರನ್ನು ಕಾಡಿದ್ದುಂಟು.ಮದ್ಯರಾತ್ರಿ ತನ್ನ ಪತ್ನಿ ಯಶೋದರೆಯನ್ನು ಮತ್ತು ಪುತ್ರ ರಾಹುಲನನ್ನು ತೊರೆದು ಕಾಡಿಗೆ ತೆರಳಲು ಹೇಗೆ ಸಾಧ್ಯವಾಯಿತು? ಇಂತಹ ಪ್ರಶ್ನೆಗಳುಳ್ಳ ಪವಾಡ ಸದೃಶದಂತಹ ಕಥೆಗಳನ್ನು ನಾವು ಓದುತ್ತಾ,ಕೇಳುತ್ತಾ ಬಂದಿದ್ದೇವೆ .ಬೌದ್ಧಧರ್ಮ ಅಥವಾ ಗೌತಮಬುದ್ದನ ಚರಿತ್ರೆ ತಟ್ಟಿರುವ ಇಂತಹ ಕಳಂಕವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಡಾ,ಅಂಬೇಡ್ಕರ್ ರವರು ಸತತ ಏಳೆಂಟು ವರುಶಗಳ ಗಂಭೀರವಾದ ಅದ್ಯಯನ,ಸಂಶೋಧನೆಯ ಮೂಲಕ,ಪಾಲಿ ಪಾಕೃತ ಮತ್ತು ಸಂಸ್ಕೃತ ಗ್ರಂಥಗಳನ್ನು ಜಾಲಾಡಿ ಗೌತಮ ಬುದ್ದನ ನಿಜವಾದ ಚರಿತ್ರೆ ಯನ್ನು ಈ ಕೃತಿಯಲ್ಲಿ ಕಟ್ಟಿಕೊಡುವುದರ ಮೂಲಕ ಗೌತಮ ಬುದ್ಧನು ಈ ಜಗತ್ತು ಕಂಡ ಅತಿ ಶ್ರೇಷ್ಠ ದಾರ್ಶನಿಕ ಎಂಬುದನ್ನು ರುಜುವಾತು ಪಡಿಸಿದ್ದಾರೆ.