Author: ಲತಾ ಗುತ್ತಿ
Category: ಕಾದಂಬರಿ
Publisher: ಅಂಕಿತ ಪ್ರಕಾಶನ
Year of Publication: 2023
Price: ₹475 ₹427
೧೯೭೨ ರಲ್ಲಿ ಆಚರಿಸಿದ ಸ್ವಾತಂತ್ರ್ಯದ ಬೆಳ್ಳಿಹಬ್ಬದ ನಂತರದ ಮೂರು ವರುಷಗಳಲ್ಲಿನ ಅದೇನೋ ಕಾರಣಗಳಿಂದ ದೇಶಾದ್ಯಂತ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿ ಪತ್ರಿಕಾ ಕಾರ್ಯಾಲಯಗಳಿಗೆ ಬೀಗ ,ದೇಶವೇಲ್ಲಾ ಜೈಲಾಗಿ ಪರಿವರ್ತನೆ,ಅಲ್ಲಲ್ಲಿ ಕೆಲವು ಅಮಾನುಷ ಘಟನೆಗಳು ನಡೆದ ಸಂದರ್ಬ.ರಾಜಕೀಯ ದಲ್ಲಿ ಸಮಾಜದಲ್ಲಿ ಅನೇಕ ಪಲ್ಲಟಗಳು ಚದುರಂಗದಾಟ ನಡೆದುಹೋದವು.
ಈ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಾಷ್ಟ್ರದ ರಾಜಕೀಯ ಚಟುವಟಿಕೆಗಳ ಜೋತೆಗೆ,ಗ್ರಾಮ ನಗರಗಳ ಜೀವನ ಚಿತ್ರಣಗಳ ಆಗುಹೋಗುಗಳನ್ನು, ಕೆಲಮಟ್ಟಿಗೆ ವಿಶ್ವದ ಆಗುಹೋಗುಗಳನ್ನು ಓದುಗರೆದುರು ಸಮಾನಾಂತರವಾಗಿ ತೆರೆದಿಡುವ ಪ್ರಯತ್ನವನ್ನು ಈ ಕೃತಿಯಲ್ಲಿ ಲೇಖಕಿ ಲತಾ ಗುತ್ತಿ ಅವರು ಮಾಡಿದ್ದಾರೆ.ಆದ್ದರಿಂದ ಏಕಕಾಲಕ್ಕೆ ಈ ಕೃತಿಯು ಮೂರುಸ್ತರದ ಆಗುಹೋಗುಗಳನ್ನು ಪರಸ್ಪರ ಪ್ರಬಾವಿಸುವ ಪರಿಯನ್ನು ಚಿತ್ರಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ.