ದರಗಾ (ಹಯ್ದರಾಬಾದ ಕರ‍್ನಾಟಕ ಸಾಲು: ಸಂಪುಟ 2)


Author: ಬಸವರಾಜ ಕೋಡಗುಂಟಿ

Category: ಸಂಶೋಧನೆ

Publisher: ಬಂಡಾರ ಪ್ರಕಾಶನ

Year of Publication: 2018


Price: ₹120 ₹96

Qty:

Description

ಹಯ್ದರಾಬಾದ ಕರ‍್ನಾಟಕ ಇತಿಹಾಸದ ಉದ್ದಕ್ಕೂ ವಿಚಿತ್ರ ಶ್ರೀಮಂತಿಕೆಯನ್ನು ಹಲವು ನಿರಿಗೆಗಳಲ್ಲಿ ಹೊಂದು ಸಂಕೀರ‍್ಣ ಮತ್ತು ಸಂಪತ್ಬರಿದ ಬದುಕನ್ನು ಹೊಂದಿದ್ದೂ ಇಂದು ಹಿಂದುಳಿದ ಪ್ರದೇಶವಾಗಿದೆ. ಈ ಪ್ರದೇಶವನ್ನು ಅರ‍್ತ ಮಾಡಿಕೊಳ್ಳುವುದಕ್ಕೆ ಆಳವಾದ ಮತ್ತು ವಿಬಿನ್ನ ವಲಯಗಳ, ಆಯಾಮಗಳ ಅದ್ಯಯನಗಳು ಅವಶ್ಯ. ಇದಕ್ಕೆ ಪೂರಕವಾಗಿ ಹಯ್ದರಾಬಾದ ಕರ‍್ನಾಟಕದ ಮಾಹಿತಿ, ಚರ‍್ಚೆ, ತಿಳುವಳಿಕೆ ಇವೆಲ್ಲ ಕನ್ನಡ ಮತ್ತು ಕರ‍್ನಾಟಕದ ವಿದ್ವತ್ತಿನಲ್ಲಿ ಕಡಿಮೆ. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಬಸವರಾಜ ಕೋಡಗುಂಟಿ ಅವರು ಹಯ್ದರಾಬಾದ ಕರ‍್ನಾಟಕ ಸರಣಿಯನ್ನು ತರುತ್ತಿದ್ದಾರೆ.

ಸೂಪಿ ಪಂತದೊಂದಿಗೆ ಬೆಳೆದ ದರಗಾಗಳ ರಚನೆ, ಇತಿಹಾಸ, ಸೂಪಿ ಸಂತರು, ಅವರ ಬದುಕು ಮತ್ತು ಸಂದೇಶ, ನಂಬಿಕೆ, ಆಚರಣೆ, ಸಂಪ್ರದಾಯ, ದರಗಾದ ಬಕ್ತರು, ಮಹತ್ವ ಹೀಗೆ ದರಗಾ ಕೇಂದ್ರಿತವಾದ, ದರಗಾ, ಸೂಪಿ ಪಂತ ಮತ್ತು ಈ ಪ್ರದೇಶದ ಸಮಾಜವನ್ನು ಅರ‍್ತ ಮಾಡಿಕೊಳ್ಳುವುದಕ್ಕೆ ಸಹಾಯಕವಾದ ಬರಹಗಳನ್ನು ಈ ಸಂಪುಟದಲ್ಲಿ ಕಾಣಬಹುದು. ಈ ಪ್ರದೇಶದಲ್ಲಿ ದರಗಾಗಳು ಸಮಾಜದ ನೆಮ್ಮದಿಗೆ ರಾತ್ರಿಯೆಲ್ಲ ನಂದಾದೀಪ ಇಟ್ಟ ಹಾಗೆ ಇರುವುದನ್ನು ಇದರಲ್ಲಿ ಕಾಣಬಹುದು.