ಹಯ್ದರಾಬಾದ ಕರ್‍ನಾಟಕದ ಬಾಶೆಗಳು


Author: ಬಸವರಾಜ ಕೋಡಗುಂಟಿ

Category: ಭಾಷಾವಿಜ್ಞಾನ

Publisher: ಬಂಡಾರ ಪ್ರಕಾಶನ

Year of Publication: 2021


Price: ₹100 ₹80

Qty:

Description

ಬಸವರಾಜ ಕೋಡಗುಂಟಿ ಅವರು ೨೦೧೧ರ ಜನಗಣತಿಯ ಮಾಹಿತಿಯನ್ನು ಇಟ್ಟುಕೊಂಡು ಹಯ್ದರಾಬಾದ ಕರ‍್ನಾಟಕ ಪರಿಸರದ ಬಾಶೆಗಳನ್ನು ಪರಿಚಯಿಸುವ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಿದ್ದಾರೆ. ಇದರಲ್ಲಿ ಈ ಜನಗಣತಿ ಒದಗಿಸುವ ಮಾಹಿತಿಯನ್ನು ಮುರಿದು ಬಾಶಾವಿಗ್ನಾನದ ಸಹಾಯದಿಂದ ಸಾಮಾಜಿಕ ಬಾಶಿಕ ವಾಸ್ತವಗಳನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿ ಮಾಡಿದ್ದಾರೆ. ಈ ಬಾಗದಲ್ಲಿ ಲಂಬಾಣಿ, ಕುಳು, ಬೆಂಗಾಲಿ ಇವುಗಳು ಮಹತ್ವದ ಬಾಶೆಗಳಾಗುವುದು ಅಚ್ಚರಿ ತರದೆ ಇರದು. ಈ ಪುಸ್ತಕದಲ್ಲಿ ದೊಡ್ಡ ಬಾಶೆಗಳ ಸ್ತಾನಮಾನ, ವ್ಯಾಪಿಸಿಕೊಂಡಿರುವಿಕೆ ಇವನ್ನು ತೋರಿಸಿದ್ದಾರೆ. ಅದರೊಟ್ಟಿಗೆ ಈ ಬಾಗದ ಶಾಸನಗಳ ಬಾಶೆ, ಬುಡಕಟ್ಟುಗಳ ಬಾಶೆ ಮೊದಲಾದವನ್ನು ಕುರಿತು ಬರೆದ ಬರಹಗಳು ಇವೆ.