ಕನ್ನಡ (ಹಯ್ದರಾಬಾದ ಕರ‍್ನಾಟಕ ಸಾಲು: ಸಂಪುಟ 4)


Author: ಬಸವರಾಜ ಕೋಡಗುಂಟಿ

Category: ಸಂಶೋಧನೆ

Publisher: ಬಂಡಾರ ಪ್ರಕಾಶನ

Year of Publication: 2018


Price: ₹80 ₹64

Qty:

Description

ಹಯ್ದರಾಬಾದ ಕರ‍್ನಾಟಕ ಇತಿಹಾಸದ ಉದ್ದಕ್ಕೂ ವಿಚಿತ್ರ ಶ್ರೀಮಂತಿಕೆಯನ್ನು ಹಲವು ನಿರಿಗೆಗಳಲ್ಲಿ ಹೊಂದು ಸಂಕೀರ‍್ಣ ಮತ್ತು ಸಂಪತ್ಬರಿದ ಬದುಕನ್ನು ಹೊಂದಿದ್ದೂ ಇಂದು ಹಿಂದುಳಿದ ಪ್ರದೇಶವಾಗಿದೆ. ಈ ಪ್ರದೇಶವನ್ನು ಅರ‍್ತ ಮಾಡಿಕೊಳ್ಳುವುದಕ್ಕೆ ಆಳವಾದ ಮತ್ತು ವಿಬಿನ್ನ ವಲಯಗಳ, ಆಯಾಮಗಳ ಅದ್ಯಯನಗಳು ಅವಶ್ಯ. ಇದಕ್ಕೆ ಪೂರಕವಾಗಿ ಹಯ್ದರಾಬಾದ ಕರ‍್ನಾಟಕದ ಮಾಹಿತಿ, ಚರ‍್ಚೆ, ತಿಳುವಳಿಕೆ ಇವೆಲ್ಲ ಕನ್ನಡ ಮತ್ತು ಕರ‍್ನಾಟಕದ ವಿದ್ವತ್ತಿನಲ್ಲಿ ಕಡಿಮೆ. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಬಸವರಾಜ ಕೋಡಗುಂಟಿ ಅವರು ಹಯ್ದರಾಬಾದ ಕರ‍್ನಾಟಕ ಸರಣಿಯನ್ನು ತರುತ್ತಿದ್ದಾರೆ.

ಕನ್ನಡ ಬಾಶೆ ಹಲವು ಒಳನುಡಿಗಳನ್ನು ಹೋಮದಿ ವಯಿವಿದ್ಯಮಯವಾಗಿ ಬಳಕೆಯಲ್ಲಿರುವುದು ಸ್ಪಶ್ಟ. ಹಯ್ದರಾಬಾದ ಕರ‍್ನಾಟಕ ಪ್ರದೇಶದಲ್ಲಿಯೂ ಈ ವಯಿವಿದ್ಯತೆ ಅಗಾದವಾಗಿ ಇರುವುದನ್ನು ಕಾಣಬಹುದು. ಇದನ್ನು ಕಟ್ಟಿಕೊಡುವ ಹಾಗೆ ಈ ಸಂಪುಟವನ್ನು ತಯಾರಿಸಿದೆ. ಹಯ್ದರಾಬಾದ ಕರ‍್ನಾಟಕವನ್ನೂ ಕನ್ನಡದ ಒಳನುಡಿಗಳನ್ನೂ ಅರಿತುಕೊಳ್ಳುವಲ್ಲಿ ಈ ಸಂಪುಟ ಹೆಚ್ಚು ಸಹಾಯಕ.