Author: ಬಸ್ಸಯ್ಯ ಸ್ವಾಮಿ
Category: ಸಂಶೋಧನೆ
Publisher: ಬಂಡಾರ ಪ್ರಕಾಶನ
Year of Publication: 2023
Price: ₹250 ₹200
ಸಾಹಿತ್ಯ ವಿಮರ‍್ಶೆ ಇಲ್ಲವೆ ಸಾಹಿತ್ಯ ಸಂಶೋದನೆ ಎನ್ನುವುದು ಆದುನಿಕ ಕಾಲದಲ್ಲಿ ಹಲವು ವಿಬಿನ್ನ ಮುಕಗಳಲ್ಲಿ ಬೆಳೆದಿದೆ ಮತ್ತು ಬೆಳೆಯುತ್ತಿದೆ. ಸಾಹಿತ್ಯ ಅದ್ಯಯನವು ಸಮಾಜವನ್ನು ವಿಬಿನ್ನ ವಲಯಗಳಲ್ಲಿ ಅರಿತುಕೊಳ್ಳುವುದಕ್ಕೆ ಸಹಾಯಕವಾಗುತ್ತಿದೆ. ಈ ಬಗೆಯ ಅದ್ಯಯನಗಳು ಕನ್ನಡದ ಸಂದರ‍್ಬದಲ್ಲಿ ಕಮ್ಮಿ. ಇಂತ ಹೊತ್ತಿನಲ್ಲಿ ಕನ್ನಡ ಸಾಹಿತ್ಯದಲ್ಲಿ ವಲಸೆಯ ಸ್ವರೂಪ, ಚಹರೆ ಮತ್ತು ಮಂದುವರೆದು ವಲಸೆಯ ಪ್ರಗ್ನೆ ಇವುಗಳನ್ನು ಗುರುತಿಸುವ ಕೆಲಸವನ್ನು ಈ ಪುಸ್ತಕ ಮಾಡುತ್ತದೆ. ವಲಸೆ ಒಂದು ಸಾಮಾಜಿಕ ವಾಸ್ತವ. ವಲಸೆಯಿಂದ ಸಾಮಾಜಿಕ, ಬವುತಿಕವಾಗಿ ಆಗುವ ಸಮಸ್ಯೆಗಳಂತೆಯೆ ಮಾನಸಿಕವಾಗಿ, ಸಾಂಸ್ಕ್ರುತಿಕವಾಗಿ ಆಗುವ ಸಮಸ್ಯೆಗಳೂ ಹಲವು. ಇವುಗಳನ್ನು ಅರಿತುಕೊಳ್ಳುವುದಕ್ಕೆ ಅದ್ಯಯನಗಳು ಅವಶ್ಯ. ಹಲವು ಬಗೆಯ ಸಾಮಾಜಿಕ, ಸಾಂಸ್ಕ್ರುತಿಕ ಪದರುಗಳನ್ನು ಹೊಂದಿರುವ ಬಾರತದಂತ ದೇಶದಲ್ಲಿ ವಲಸೆ ಉಂಟುಮಾಡುವ ಸಾಂಸ್ಕ್ರುತಿಕ ತಲ್ಲಣಗಳು ಬಹುಮುಕಿ. ಕನ್ನಡದ ಆಯ್ದ ಕಾದಂಬರಿಗಳಲ್ಲಿ ಈ ಎಲ್ಲ ಅಂಶಗಳನ್ನು ಹೆಕ್ಕಿ ಆರಯ್ಯುವ ಕೆಲಸವನ್ನು ಈ ಪುಸ್ತಕ ಮಾಡಿದೆ. ಇದರಲ್ಲಿ ಸ್ಮ್ರುತಿ-ವಿಸ್ಮ್ರುತಿ, ದೇವರು-ದರ‍್ಮ, ಸಂಪ್ರದಾಯ, ನಗರ-ಪಟ್ಟಣ ಇಂತಾ ತಿಕ್ಕಾಟಗಳನ್ನು ಗಮನಿಸುವ ಮತ್ತು ಇವುಗಳಲ್ಲಿ ಕಂಡುಬರುವ ಸಾಂಸ್ಕ್ರುತಿಕ ಸೂಕ್ಶ್ಮಗಳು, ಮಾನಸಿಕ ತಲ್ಲಣಗಳು, ಕಳೆದುಕೊಳ್ಳುವ, ಪಡೆದುಕೊಳ್ಳುವ, ಹೊಂದಿಕೊಳ್ಳುವ ಬದುಕಿನ ವಿಪರ‍್ಯಯದ ಸ್ತಿತಯನ್ನು ಈ ಪುಸ್ತಕ ತೋರಿಸುತ್ತದೆ. ಇದರೊಟ್ಟಿಗೆ ಸಾಮಾಇಕವೂ ಎನ್ನಬಹುದಾದ ವಲಸೆ ಮತ್ತು ಮಹಿಳೆ ಎಂಬ ಆಯಾಮವನ್ನೂ ಇದು ಗಮನಿಸುತ್ತದೆ.