ಕನ್ನಡ ವಿಬಕ್ತಿ ರೂಪಗಳ ಅಯ್ತಿಹಾಸಿಕ ಬೆಳವಣಿಗೆ


Author: ಡಾ. ಬಸವರಾಜ ಕೋಡಗುಂಟಿ

Category: ಭಾಷಾವಿಜ್ಞಾನ

Publisher: ಬಂಡಾರ ಪ್ರಕಾಶನ

Year of Publication: 2011


Price: ₹150 ₹120

Qty:

Description

ಜಗತ್ತಿನ ಬಾಶೆಗಳಲ್ಲಿ ಕ್ರಿಯಾಪದಗಳು ವಿಬಕ್ತಿಗಳ ಮೂಲ ಎಂಬ ಗಟ್ಟಿಯಾದ ವಾದಕ್ಕೆ ಎದುರಾಗಿ ದ್ರಾವಿಡದಲ್ಲಿ ವಿಬಕ್ತಿ ರೂಪಗಳ ಮೂಲ ತೋರುಗ ಪದಗಳಾಗಿವೆ ಎಂದು ಬಸವರಾಜ ಕೋಡಗುಂಟಿ ಅವರು ಈ ಪುಸ್ತಕದಲ್ಲಿ ವಾದಿಸುತ್ತಾರೆ. ತೋರುಗ ಪದಗಳು ಮೊದಲು ಸಪ್ತಮಿಗೆ ಬಳಕೆಯಾಗಲು ಬಂದು ಆನಂತರ ಅಲ್ಲಿಂದ ಇತರ ಕಾರಕಗಳ ಅಬಿವ್ಯಕ್ತಿಗೆ ಪಲ್ಲಟವಾಗುತ್ತವೆ ಎಂದು ವಾದ ಮಂಡಿಸುತ್ತಾರೆ. ಮೂಲದ್ರಾವಿಡದಿಂದ, ಸುಮಾರು ನಲವತ್ತು ದ್ರಾವಿಡ ಬಾಶೆಗಳಿಂದ ಆದಾರಗಳನ್ನು ಒದಗಿಸಿ ಈ ವಾದವನ್ನು ಎತ್ತಿ ಹಿಡಿಯುತ್ತಾರೆ. ಅಯ್ದನೆ ಶತಮಾನದಿಂದ ಇಂದಿನವರೆಗಿನ ಮತ್ತು ಸುಮಾರು ನಲವತ್ತು ಕನ್ನಡದ ಒಳನುಡಿಗಳಿಂದ ಉದಾಹರಣೆಗಳನ್ನು ತಮ್ಮ ವಾದಕ್ಕೆ ಪೂರಕವಾಗಿ ಮಂಡಿಸುತ್ತಾರೆ. ಪ್ರತಿಯೊಂದು ವಿಬಕ್ತಿ ರೂಪ ಹೇಗೆ ಬೆಳೆದು ಬಂದಿದೆ ಎಂಬುದನ್ನು ಇದರಲ್ಲಿ ಚಿತ್ರಿಸುತ್ತಾರೆ.