Author: ಎಚ್.ಎಸ್. ವಿರೂಪಾಕ್ಷಪ್ಪ
Category: ಸಂಶೋಧನೆ
Publisher: ಬಂಡಾರ ಪ್ರಕಾಶನ
Year of Publication: 2013
Price: ₹300 ₹240
ಕರ್ನಾಟಕದಲ್ಲಿ ಕೃಷಿ ಸಾವಿರಾರು ವರುಷಗಳಿಂದ ನಡೆದುಬಂದಿದೆ, ಹಾಗೆಯೆ ಕನ್ನಡದಲ್ಲಿ ಕೃಷಿಶಾಸ್ತ್ರವೂ ಕೂಡ ಬೆಳೆದಿದೆ. ಕನ್ನಡ ಸಾಹಿತ್ಯದಲ್ಲಿ, ಶಾಸನಗಳಲ್ಲಿ ವ್ಯಾಪಕವಾಗಿ ಕೃಷಿಯ ಬಗೆಗೆ ಉಲ್ಲೇಖಗಳು ಬರುತ್ತವೆ ಮತ್ತು ಕೃಷಿಗೆ ಸಂಬಂಧಿಸಿದ ಮಹತ್ವದ ಕೃತಿಗಳೂ ಬಂದಿವೆ. ಈ ಎಲ್ಲ ಉಲ್ಲೇಖಗಳನ್ನು ಮತ್ತು ಕೃಷಿಗೆ ಸಂಬಂಧಿಸಿದ ಕೃತಿಗಳನ್ನು ಹಲವಾರು ಆಯಾಮಗಳಲ್ಲಿ ಡಾ. ಎಚ್.ಎಸ್. ವಿರೂಪಾಕ್ಷಪ್ಪ ಅವರು ಅಧ್ಯಯನ ಮಾಡಿದ್ದಾರೆ. ಕನ್ನಡದಲ್ಲಿ ಕೃಷಿಗೆ ಸಂಬಂಧಿಸಿದ ಪಾರಂಪರಿಕ ಅರಿವನ್ನು ಆಳವಾಗಿ ಮತ್ತು ವಿಸ್ತಾರವಾಗಿ ನೋಡಿದ ಮಹತ್ವದ ಕೃತಿ ಈ ಪುಸ್ತಕ.