Author: ರೇಣುಕಾ ಕೋಡಗುಂಟಿ
Category: ಜಾನಪದ ಸಾಹಿತ್ಯ
Publisher: ಬಂಡಾರ ಪ್ರಕಾಶನ
Year of Publication: 2023
Price: ₹200 ₹160
ಕರ‍್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಬಿನ್ನವಿಬಿನ್ನವಾದ ಜನಪದ ಆಟಗಳು ಬಳಕೆಯಲ್ಲಿವೆ. ಕೆಲವು ಆಟಗಳು ಪ್ರಾದೇಶಿಕ ಭಿನ್ನತೆಗಳನ್ನು ಹೊಂದಿದ್ದರೆ, ಇನ್ನು ಕೆಲವು ಆಟಗಳು ಕೆಲವು ಪ್ರದೇಶಗಳಿಗೆ ಮಾತ್ರ ನಿರ‍್ದಿಶ್ಟವಾಗಿವೆ. ಜನಪದ ಆಟಗಳು ಯುದ್ದ, ಇತಿಹಾಸ, ಪ್ರಕ್ರುತಿ, ಸಮಾಜ, ಸಂಸ್ಕ್ರುತಿ ಹೀಗೆ ವಿಭಿನ್ನ ಹಿನ್ನೆಲೆಯನ್ನು ಹೊಂದಿವೆ ಮತ್ತು ಸಂಕೀರ‍್ಣ ರಚನೆಯನ್ನು ಹೊಂದಿವೆ. ಈ ಜನಪದ ಆಟಗಳ ವಿಶ್ವವನ್ನು ತೆರೆದು ತೋರಿಸುವ, ಅವುಗಳ ಸಂಶೋದನೆ, ಆ ಮೂಲಕ ಸಮಾಜವನ್ನು ತಿಳಿದುಕೊಳ್ಳುವುದಕ್ಕೆ ಸಹಾಯಕವಾಗುವ ಹನ್ನೆರಡು ಲೇಕನಗಳನ್ನು ರೇಣುಕಾ ಕೋಡಗುಂಟಿ ಅವರು ಸಂಪಾದಿಸಿದ್ದಾರೆ.