ಕೋಟೆ (ಹಯ್ದರಾಬಾದ ಕರ‍್ನಾಟಕ ಸಾಲು: ಸಂಪುಟ 6)


Author: ಬಸವರಾಜ ಕೋಡಗುಂಟಿ

Category: ಸಂಶೋಧನೆ

Publisher: ಬಂಡಾರ ಪ್ರಕಾಶನ

Year of Publication: 2019


Price: ₹90 ₹72

Qty:

Description

ಹಯ್ದರಾಬಾದ ಕರ‍್ನಾಟಕ ಇತಿಹಾಸದ ಉದ್ದಕ್ಕೂ ವಿಚಿತ್ರ ಶ್ರೀಮಂತಿಕೆಯನ್ನು ಹಲವು ನಿರಿಗೆಗಳಲ್ಲಿ ಹೊಂದು ಸಂಕೀರ‍್ಣ ಮತ್ತು ಸಂಪತ್ಬರಿದ ಬದುಕನ್ನು ಹೊಂದಿದ್ದೂ ಇಂದು ಹಿಂದುಳಿದ ಪ್ರದೇಶವಾಗಿದೆ. ಈ ಪ್ರದೇಶವನ್ನು ಅರ‍್ತ ಮಾಡಿಕೊಳ್ಳುವುದಕ್ಕೆ ಆಳವಾದ ಮತ್ತು ವಿಬಿನ್ನ ವಲಯಗಳ, ಆಯಾಮಗಳ ಅದ್ಯಯನಗಳು ಅವಶ್ಯ. ಇದಕ್ಕೆ ಪೂರಕವಾಗಿ ಹಯ್ದರಾಬಾದ ಕರ‍್ನಾಟಕದ ಮಾಹಿತಿ, ಚರ‍್ಚೆ, ತಿಳುವಳಿಕೆ ಇವೆಲ್ಲ ಕನ್ನಡ ಮತ್ತು ಕರ‍್ನಾಟಕದ ವಿದ್ವತ್ತಿನಲ್ಲಿ ಕಡಿಮೆ. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಬಸವರಾಜ ಕೋಡಗುಂಟಿ ಅವರು ಹಯ್ದರಾಬಾದ ಕರ‍್ನಾಟಕ ಸರಣಿಯನ್ನು ತರುತ್ತಿದ್ದಾರೆ.

ಹಯ್ದರಾಬಾದ ಕರ‍್ನಾಟಕದಲ್ಲಿ ನೂರರಶ್ಟು ಕೋಟೆಗಳಿವೆ. ಇದರಲ್ಲಿ ಆಯ್ದ ಕೋಟೆಗಳನ್ನು ಅವುಗಳ ರಚನೆ, ನಿರ‍್ಮಾಣ, ಇತಿಹಾಸ, ಅದರ ಹಿಂದಿನ ರಾಜಕೀಯ ಮೊದಲಾದ ಆಶಯಗಳು, ಕೋಟೆ ಮತ್ತು ಸಾಮಾನ್ಯರ ಬದುಕು, ಇತಿಹಾಸದ ವಿಬಿನ್ನ ಆಯಾಮಗಳಲ್ಲಿ ಇವು ವಹಿಸಿದ ಪಾತ್ರ ಈ ಮೊದಲಾದವನ್ನು ಪರಿಚಯಿಸುವಂತ ಲೇಕನಗಳ ಸಂಕಲನ ಈ ಸಂಪುಟ.