ರಾಜಮನೆತನ (ಹಯ್ದರಾಬಾದ ಕರ‍್ನಾಟಕ ಸಾಲು: ಸಂಪುಟ 8)


Author: ಬಸವರಾಜ ಕೋಡಗುಂಟಿ

Category: ಸಂಶೋಧನೆ

Publisher: ಬಂಡಾರ ಪ್ರಕಾಶನ

Year of Publication: 2021


Price: ₹230 ₹184

Qty:

Description

ಹಯ್ದರಾಬಾದ ಕರ‍್ನಾಟಕ ಇತಿಹಾಸದ ಉದ್ದಕ್ಕೂ ವಿಚಿತ್ರ ಶ್ರೀಮಂತಿಕೆಯನ್ನು ಹಲವು ನಿರಿಗೆಗಳಲ್ಲಿ ಹೊಂದು ಸಂಕೀರ‍್ಣ ಮತ್ತು ಸಂಪತ್ಬರಿದ ಬದುಕನ್ನು ಹೊಂದಿದ್ದೂ ಇಂದು ಹಿಂದುಳಿದ ಪ್ರದೇಶವಾಗಿದೆ. ಈ ಪ್ರದೇಶವನ್ನು ಅರ‍್ತ ಮಾಡಿಕೊಳ್ಳುವುದಕ್ಕೆ ಆಳವಾದ ಮತ್ತು ವಿಬಿನ್ನ ವಲಯಗಳ, ಆಯಾಮಗಳ ಅದ್ಯಯನಗಳು ಅವಶ್ಯ. ಇದಕ್ಕೆ ಪೂರಕವಾಗಿ ಹಯ್ದರಾಬಾದ ಕರ‍್ನಾಟಕದ ಮಾಹಿತಿ, ಚರ‍್ಚೆ, ತಿಳುವಳಿಕೆ ಇವೆಲ್ಲ ಕನ್ನಡ ಮತ್ತು ಕರ‍್ನಾಟಕದ ವಿದ್ವತ್ತಿನಲ್ಲಿ ಕಡಿಮೆ. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಬಸವರಾಜ ಕೋಡಗುಂಟಿ ಅವರು ಹಯ್ದರಾಬಾದ ಕರ‍್ನಾಟಕ ಸರಣಿಯನ್ನು ತರುತ್ತಿದ್ದಾರೆ.

ಹಯ್ದರಾಬಾದ ಕರ‍್ನಾಟಕದಲ್ಲಿ ಸುಮಾರು ನಲವತ್ತರಶ್ಟು ದೊಡ್ಡ ಮತ್ತು ಸಣ್ಣ ರಾಜಮನೆತನಗಳು ಆಡಳಿತ ನಡೆಸಿವೆ. ಈ ಬಾಗವನ್ನು ಆಳಿದ ಬಹುತೇಕ ಮನೆತನಗಳನ್ನು ಕೇಂದ್ರೀಕರಿಸ ಅವುಗಳ ಇತಿಹಾಸ, ಆಡಳಿತ, ಸಾಮಾಜಿಕತೆ, ಸಂಸ್ಕ್ರುತಿ, ಮತಪಂತ ಹೀಗೆ ವಿವಿದ ಆಯಾಮಗಳನ್ನು ಪರಿಚಯಿಸುವ ಲೇಕನಗಳನ್ನು ಈ ಸಂಪುಟ ಹೊಂದಿದೆ.