Author: ಬಸವರಾಜ ಕೋಡಗುಂಟಿ
Category: ಸಂಶೋಧನೆ
Publisher: ಬಂಡಾರ ಪ್ರಕಾಶನ
Year of Publication: 2021
Price: ₹400 ₹320
ಹಯ್ದರಾಬಾದ ಕರ‍್ನಾಟಕ ಇತಿಹಾಸದ ಉದ್ದಕ್ಕೂ ವಿಚಿತ್ರ ಶ್ರೀಮಂತಿಕೆಯನ್ನು ಹಲವು ನಿರಿಗೆಗಳಲ್ಲಿ ಹೊಂದು ಸಂಕೀರ‍್ಣ ಮತ್ತು ಸಂಪತ್ಬರಿದ ಬದುಕನ್ನು ಹೊಂದಿದ್ದೂ ಇಂದು ಹಿಂದುಳಿದ ಪ್ರದೇಶವಾಗಿದೆ. ಈ ಪ್ರದೇಶವನ್ನು ಅರ‍್ತ ಮಾಡಿಕೊಳ್ಳುವುದಕ್ಕೆ ಆಳವಾದ ಮತ್ತು ವಿಬಿನ್ನ ವಲಯಗಳ, ಆಯಾಮಗಳ ಅದ್ಯಯನಗಳು ಅವಶ್ಯ. ಇದಕ್ಕೆ ಪೂರಕವಾಗಿ ಹಯ್ದರಾಬಾದ ಕರ‍್ನಾಟಕದ ಮಾಹಿತಿ, ಚರ‍್ಚೆ, ತಿಳುವಳಿಕೆ ಇವೆಲ್ಲ ಕನ್ನಡ ಮತ್ತು ಕರ‍್ನಾಟಕದ ವಿದ್ವತ್ತಿನಲ್ಲಿ ಕಡಿಮೆ. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಬಸವರಾಜ ಕೋಡಗುಂಟಿ ಅವರು ಹಯ್ದರಾಬಾದ ಕರ‍್ನಾಟಕ ಸರಣಿಯನ್ನು ತರುತ್ತಿದ್ದಾರೆ.
ಹಯ್ದರಾಬಾದ ಕರ‍್ನಾಟಕದಲ್ಲಿ ಶಿಲಾಯುಗದ ನಾಲ್ಕಯ್ದು ನೂರು ಕೇಂದ್ರಗಳಿವೆ. ಈ ಸಂಪುಟದಲ್ಲಿ ಒಂದು ಬಾಗದಲ್ಲಿ ಆಯ್ದ ಶಿಲಾಯುದ ಕೇಂದ್ರಗಳ ಮನುಶ್ಯವಸತಿ ಮತ್ತು ಅದರ ಮಹತ್ವದ ಪರಿಚಯ ಕೊಡುವ ಕೆಲವು ಲೇಕನಗಳು ಮತ್ತು ಹಯ್ದರಾಬಾದ ಕರ‍್ನಾಟಕದ ಜಿಲ್ಲೆಗಳ ಪುರಾತತ್ವ ಪರಂಪರೆಯನ್ನು ಕಟ್ಟಿಕೊಡುವ ಬರಹಗಳು ಈ ಸಂಪುಟದಲ್ಲಿ ಇವೆ. ಕನ್ನಡದಲ್ಲಿ ಶಿಲಾಯುಗಕ್ಕೆ ಸಂಬಂದಿಸಿದ ಅಪರೂಪದ ಪುಸ್ತಕಗಳಲ್ಲಿ ಇದೂ ಒಂದಾಗಿದೆ.