ಸುಕವಿಲ್ಲದ ದಾವತಿ - ಅಕ್ಕನ ವಚನಗಳ ಓದಿನ ಶೋದ


Author: ಬಸವರಾಜ ಕೋಡಗುಂಟಿ

Category: ವಿಮರ್ಶೆ

Publisher: ಬಂಡಾರ ಪ್ರಕಾಶನ

Year of Publication: 2023


Price: ₹120 ₹96

Qty:

Description

ಈ ಪುಸ್ತಕದಲ್ಲಿ ಮೊದಲಲ್ಲಿ ಆದುನಿಕ ಪೂರ‍್ವ ಕಾಲದಲ್ಲಿ ರೂಪುಗೊಂಡ ‘ಕನ್ನಡ ಸಾಹಿತ್ಯ’, ಇದರ ಬಾಗವಾಗಿ ‘ವಚನ ಸಾಹಿತ್ಯ’ ಇವುಗಳ 'ಓದಿನ ಕ್ರಮ’ಗಳನ್ನು ಮಾತಾಡಿದೆ. ನಂತರ ಅಕ್ಕಮಹಾದೇವಿಯ ವಚನಗಳ ಬಾಶೆ, ಶಯ್ಲಿ, ರಚನೆಗಳನ್ನು ಚರ‍್ಚಿಸಿದೆ. ವಚನಗಳ ಬಾಶಿಕ ರಚನೆಯನ್ನು ಇಟ್ಟುಕೊಂಡು ವಚನದ ತಾತ್ವಿಕತೆಯನ್ನು ತಿಳಿದುಕೊಳ್ಳುವ ಪ್ರಯತ್ನ ಇಲ್ಲಿದೆ. ಇದುವರೆಗೆ ಓದಲು ಸಾದ್ಯವಾಗಿಲ್ಲದ ಹಲವಾರು ಅಂಶಗಳು ಇಲ್ಲಿ ಕಾಣಿಸುತ್ತವೆ. ಅಕ್ಕನ, ವಚನದ ಅತ್ಯಂತ ವಿಬಿನ್ನವಾದ ಓದನ್ನು ಈ ಪುಸ್ತಕ ಪ್ರಸ್ತುತಪಡಿಸುತ್ತದೆ. ಈ ಪುಸ್ತಕದಲ್ಲಿ ಆಯ್ದ ಆರು ವಚನಗಳ ಮೇಲೆ ಆರು ಬರಹಗಳು ಇವೆ. ಮೂಲಬೂತವಾಗಿ ಬಾಶಿಕ ಓದನ್ನು ಮಾಡುವ ಈ ಪುಸ್ತಕ ವಚನದ ರಚನೆಯನ್ನು, ಅದರಲ್ಲಿ ಬಳಕೆಯಾಗಿರುವ ಪದಗಳು, ಪದವಿನ್ಯಾಸ, ಪದಜೋಡಣೆ ಅವುಗಳಿಂದ ಹೊಮ್ಮುವ ವಿಚಿತ್ರ ಅರ‍್ತದ ಜಗತ್ತು ಇವೆಲ್ಲವನ್ನು ತೆರೆದು ತೋರಿಸುತ್ತದೆ. ವಚನದ ವಿಶಯವನ್ನು ಓದುಗರಿಗೆ ಮುಕ್ತವಾಗಿಡುತ್ತದೆ. ಬಸವರಾಜ ಕೋಡಗುಂಟಿ ಅವರ ಬಾಶಿಕ ನೋಟದ ಅತ್ಯಂತ ಅಪರೂಪದ ಪುಸ್ತಕ ಇದು.