ಎಲ್ಲಮ್ಮ (ಹಯ್ದರಾಬಾದ ಕರ‍್ನಾಟಕ ಸಾಲು: ಸಂಪುಟ 7)


Author: ಬಸವರಾಜ ಕೋಡಗುಂಟಿ

Category: ಸಂಶೋಧನೆ

Publisher: ಬಂಡಾರ ಪ್ರಕಾಶನ

Year of Publication: 2020


Price: ₹180 ₹144

Qty:

Description

ಹಯ್ದರಾಬಾದ ಕರ‍್ನಾಟಕ ಇತಿಹಾಸದ ಉದ್ದಕ್ಕೂ ವಿಚಿತ್ರ ಶ್ರೀಮಂತಿಕೆಯನ್ನು ಹಲವು ನಿರಿಗೆಗಳಲ್ಲಿ ಹೊಂದು ಸಂಕೀರ‍್ಣ ಮತ್ತು ಸಂಪತ್ಬರಿದ ಬದುಕನ್ನು ಹೊಂದಿದ್ದೂ ಇಂದು ಹಿಂದುಳಿದ ಪ್ರದೇಶವಾಗಿದೆ. ಈ ಪ್ರದೇಶವನ್ನು ಅರ‍್ತ ಮಾಡಿಕೊಳ್ಳುವುದಕ್ಕೆ ಆಳವಾದ ಮತ್ತು ವಿಬಿನ್ನ ವಲಯಗಳ, ಆಯಾಮಗಳ ಅದ್ಯಯನಗಳು ಅವಶ್ಯ. ಇದಕ್ಕೆ ಪೂರಕವಾಗಿ ಹಯ್ದರಾಬಾದ ಕರ‍್ನಾಟಕದ ಮಾಹಿತಿ, ಚರ‍್ಚೆ, ತಿಳುವಳಿಕೆ ಇವೆಲ್ಲ ಕನ್ನಡ ಮತ್ತು ಕರ‍್ನಾಟಕದ ವಿದ್ವತ್ತಿನಲ್ಲಿ ಕಡಿಮೆ. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಬಸವರಾಜ ಕೋಡಗುಂಟಿ ಅವರು ಹಯ್ದರಾಬಾದ ಕರ‍್ನಾಟಕ ಸರಣಿಯನ್ನು ತರುತ್ತಿದ್ದಾರೆ.

ಎಲ್ಲಮ್ಮ ಇಲ್ಲವೆ ಹೆಣ್ಣುದೇವರು ದಕ್ಶಿಣ ಬಾರತದ ಪ್ರದಾನ ದೇವತೆ. ಹಯ್ದರಾಬಾದ ಕರ‍್ನಾಟಕದಲ್ಲಿ ವಿಶೇಶವಾಗಿ ಕಂಡುಬರುವಂತದು. ಎಲ್ಲಮ್ಮನಂತ ಹೆಣ್ಣುದೇವರ ಅದ್ಯಯನ ಇಲ್ಲವೆ ಇಲ್ಲವೆನ್ನುವಶ್ಟು ಕಡಿಮೆ. ಹಯ್ದರಾಬಾದ ಕರ‍್ನಾಟಕ ಪರಿಸರದಲ್ಲಿ ಕಂಡುಬರುವ ಶಿಶ್ಟವಲ್ಲದ ವಿವಿದ ಹೆಣ್ಣುದೇವರುಗಳನ್ನು ಪರಿಚಯಿಸುವ ಬರಹಗಳು ಈ ಸಂಪುಟದಲ್ಲಿವೆ. ಹೆಣ್ಣುದೇವರ ನಂಬಿಕೆ, ಆಚರಣೆ, ಅವುಗಳ ಸಾಮಾಜಿಕತೆ ಮೊದಲ್ಗೊಂಡು ಹಲವು ಆಯಾಮಗಳನ್ನು ಇಲ್ಲಿನ ಬರಹಗಳು ಕಟ್ಟಿಕೊಡುತ್ತವೆ.